ಬ್ಯಾರಿ ಭಾಷೆಯು ಮಂಗಳೂರು, ಪುತ್ತೂರುಹಾಗೂ ಸುತ್ತಮುತ್ತಲಿನ ಪ್ರದೇಶದ ಮುಸ್ಲಿಮರ ಆಡು ಭಾಷೆಯಾಗಿದೆ. ಬ್ಯಾರಿ ಭಾಷೆಯು ತುಳು, ಮಲಯಾಳಂ,ಕನ್ನಡ, ತಮಿಳು, ಅರಬ್ಬಿ ಹಾಗೂ ಹಿಂದಿ ಭಾಷೆಯ ಶಬ್ದಗಳನ್ನೊಳಗೊಂಡಿದೆ. ಬರವಣಿಗೆಗೆ ಬ್ಯಾರಿ ಭಾಷೆಯಲ್ಲಿ ಕನ್ನಡ ಲಿಪಿಯನ್ನು ಉಪಯೊಗಿಸಲಾಗಿದೆ ಹಾಗೂ ವ್ಯಾಕರಣದಲ್ಲಿ ತುಳು ಭಾಷೆಯನ್ನು ಹೋಲುತ್ತದೆ. ಬ್ಯಾರಿ ಸಮುದಾಯಕ್ಕೆ ತುಳುನಾಡಿನಲ್ಲಿ 1200 ವರ್ಷಗಳ ಇತಿಹಾಸವಿದೆ. 1891ರ ಜನಗಣತಿಯ ಪ್ರಕಾರ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ 90,345 ಬ್ಯಾರಿ ವ್ಯಾಪಾರಿಗಳಿದ್ದರೆಂದೂ ಹಾಗೂ 2011ರ ಜನಗಣತಿಯ ಅಂದಾಜು ಲೆಕ್ಕದಲ್ಲಿ 10ಲಕ್ಷ ಬ್ಯಾರಿ ಸಮುದಾಯದವರಿದ್ದಾರೆಂದು ದಾಖಲಾಗಿದೆ. ಮಂಗಳೂರಿನಲ್ಲಿ ಕರ್ನಾಟಕ ಬ್ಯಾರಿಭಾಷೆ ಸಾಹಿತ್ಯ ಅಕಾಡೆಮಿಯನ್ನು 2007ರಲ್ಲಿ ಸ್ಥಾಪಿಸಲಾಯಿತು. == ಬ್ಯಾರಿ ಪದ ನಿಷ್ಪತ್ತಿ == ಸಂಸ್ಕೃತ ಭಾಷೆಯ ‘ವ್ಯವಹಾರಿನ್’ ಶಬ್ದದ ತದ್ಭವವೆ ‘ಬೇಹಾರಿ’. ‘ವ್ಯಾಪಾರ’ ಎಂಬ ಪದಕ್ಕೆ ತುಳುವಿನಲ್ಲಿ ‘ಬೇರ’ ಎಂಬ ಅರ್ಥವಿದೆ. ವ್ಯವಹಾರಿನ್>ಬೇಹಾರಿ>ಬೇರ>ಬ್ಯಾರಿ ಎಂಬ ರೂಪ ಪಡೆದಿರಬೇಕು. ಮಲಯಾಳಿ ಮಾತನಾಡುವ ಮುಸ್ಲಿಮರನ್ನು ಸುಳ್ಯದ ಕಡೆಯ ತುಳುವರು ‘ಮಾಪ್ಲೆ’ ಎಂದು ಕರೆಯುತ್ತಾರೆ. == ತುಳು,ಕನ್ನಡ ಭಾಷೆಯೊಂದಿಗೆ ಬ್ಯಾರಿ ಭಾಷೆಯ ಪದಗಳು == ಬ್ಯಾರಿ ಭಾಷೆಯನ್ನು ತುಳುನಾಡಿನಲ್ಲಿ ಮಾತ್ರ ಆಡುತ್ತಾರೆ. ತೋರಿಕೆಗೆ ಬ್ಯಾರಿಭಾಷೆಯು ಮಲೆಯಾಳಿಯ ಉಪಭಾಷೆಯಂತಿದ್ದರೂ ಈ ಭಾಷೆಯಲ್ಲಿ ಶೇ.50ರಷ್ಟು ತುಳುವಿನ ಪದಗಳಿವೆ. ಆದುದರಿಂದ ಬ್ಯಾರಿಭಾಷೆಯನ್ನು ತುಳುಭಾಷೆಯ ಉಪಭಾಷೆಯೆಂದು ಕರೆಯುತ್ತಾರೆ. ಬ್ಯಾರಿ ತುಳು ಮತ್ತು ಕನ್ನಡ ಭಾಷೆಯ ಕೆಲವು ಸಮಾನಾರ್ಥ ಪದಗಳು ಹೀಗಿವೆ; == ಬ್ಯಾರಿ ಭಾಷೆಯ ಸರ್ವನಾಮ, ಲಿಂಗ ಮತ್ತು ವಚನಗಳು == == ಬ್ಯಾರಿ ಭಾಷೆಯ ವಾಕ್ಯರಚನೆಗಳು == == ಬ್ಯಾರಿ ಭಾಷೆಯಲ್ಲಿ ಸಂಖ್ಯಾವಾಚಕ == == ಬ್ಯಾರಿ ಭಾಷೆಯಲ್ಲಿ ಸಂಬಂಧವಾಚಕ == ಅಪ್ಪ-ಅಬ್ಬ; ಅಮ್ಮ–ಉಮ್ಮಾ; ಅಜ್ಜ-ಬೊಬ; ಅಜ್ಜಿ-ಅಜ್ಜಿಉಮ್ಮಾ; ಚಿಕ್ಕಪ್ಪ-ಕುಂಞಬ್ಬ, ಚಿಕ್ಕಮ್ಮ-ಕುಞïಮಾ; ದೊಡ್ಡಪ್ಪ-ಮೂತಬ್ಬ; ದೊಡ್ಡಮ್ಮ-ಮೂತಮಾ; ಮಾವ-ಕಾಕ; ಅತ್ತೆ-ಮಾಮಿ; ಗಂಡ-ಮಾಪುಳೆ; ಹೆಂಡತಿ-ಪೆಞಯಿ; ಅಣ್ಣ-ಮೂತೋನು; ಅತ್ತಿಗೆ- ; ಅಕ್ಕ-ದಾದ; ಬಾವ-; ತಂಗಿ-ಎಲೆಲು; ತಮ್ಮ-ಎಲೆನು, ಮೈದುನ- ; ನಾದಿನಿ- ; ಮೊಮ್ಮಗ-; ಮುತ್ತಜ್ಜ-; == ಬಾಹ್ಯ ಕೊಂಡಿ == ಬ್ಯಾರಿ ಸಮುದಾಯ == ಉಲ್ಲೇಖ ==